Tuesday, December 28, 2010

ಹಾಗೇ ಸುಮ್ಮನೆ ನಿನ್ನ ನೆನಪಾಗಿ............

[ನಿನ್ನ ಪ್ರೀತಿಯ ನೆನಪಲಿ ಎನೂ ನೆನಪಾಗಿ, ನಿನ್ನ ನೆನಪಿಸಿ... ಬರೆದ ನೆನಪಿನ ಓಲೇ; ನಿನ್ನ ಸವಿ ನೆನಪಿನಿಂದ.......]
ನನ್ನ ಎದೆಯಲಿ ಪ್ರೀತಿಯ ಬೀಜ ಬಿತ್ತಿ
ಪ್ರೇಮದ ನೀರ ಹನಿಸದೆ ಎಲ್ಲಿ ಹೋದೆ; ಓ ಗೆಳತಿ,
ನಿನ್ನ ನೆನಪಲಿ ಈ ನನ್ನ ಜೀವವ ನೂಕ್ಕುತ್ತಿರುವೆ
ಈ ನನ್ನ ನೆನಪಿಗೆ ಜೀವ ತುಂಬಲು ಬಾರೇ ನನ್ನ ಒಲವೇ        //ಪ//

           ನನ್ನ ಪ್ರೀತಿಯ ನಿನಗೆ ಹೇಗೆ ತೋರಿಸಲಿ
           ಈ ಜೀವ ನಿನ್ನದೆಂದು ನಿನಗೆ ಹೇಗೆ ಹೇಳಲಿ
           ನನ್ನ ಬಾಹುಬಂಧನದಲಿ ಬಂದಿತಳಾಗು ಒಮ್ಮೆ;
           ಈ ನನ್ನ ಎದೆಬಡಿತ ಕೇಳು ಬಾ ಹಾಗೆ ಸುಮ್ಮನೇ,,,,,, 
           ನಿನ್ನ ಹೆಸರೆ ಮಿಡಿಯುತ್ತಿದೆ ಪ್ರತಿ ಬಡಿತದಲ್ಲೋ....
           ಬರಿ ನಿನೇ ತುಂಬಿರುವೆ ನನ್ನ ಪ್ರತಿ ಸ್ವಾಸದಲ್ಲೂ,,,,,,,,,,,,,, //1//
                
                    ನನ್ನ ಜೀವಕ್ಕೆ ಜೀವವಾಗಿ ನೀನಿರುವೇ.......
                    ನನ್ನ ಎದೆಯಾಳದ ದೇವಿ ನಿನಾಗಿ ನಿಂತಿರುವೇ
                    ಒಮ್ಮೆಯಾದರು ಕರುಣೆ ತೋರಿಸು ನನ್ನ ಮೇಲೆ;
                    ಸುರಿಸು ನಿನ್ನ ಪ್ರೀತಿಯ ಮು್ತ್ತಿನ ಮಳೆ, ಓ ನನ್ನ ನಲ್ಲೆ
                    ಓ ಗೆಳತಿ, ಎಂದೆಂದಿಗೂ ನಿನ್ನ ಮರೆಯನು ನಾನು
                    ನಿನ್ನ ಮರೆತ ದಿನ ಈ ಜಗವ ಮರೇಯುವೆ ನಾನು....... //2//

             ಸೂರ್ಯ ಚಂದ್ರ ಚುಕ್ಕಿಗಳ ಆಣೆ......
             ನಿನ್ನ ಇಷ್ಟೋಂದು ಪ್ರೀತಿಸುವ ಹುಚ್ಚ ನಾನೇ
             ಓ ನನ್ನ ನಲ್ಲೇ ಹಿಂತಿರುಗಿ ನೋಡು ಒಮ್ಮೆ;
             ಅಪ್ಪಿ ತಪ್ಪಿ ಹಾಗೇ ಸುಮ್ಮನೇ,,,,,,,,,,,,,,,,,,
             ನಿನ್ನ ದಾರಿಯ ಕಾಯುತಾ ನಾನಿರುವೇ.....
             ನೀ ಬರುವ ದಾರಿಗೆ ನಗೆ ಹೂವ ಹಾಸಿ ಕಾದಿರುವೇ.......!      //3//



                                                                                     ಇಂತಿ ನಿನ್ನ ಪ್ರೀತಿಯ
                                                                                            ಪ್ರಭಿ............!

                                                           

Thursday, November 11, 2010

ಏನ್ನೆಂದು ನಿನ್ನ ಬಣ್ನಿಸಲಿ...........?

               ನೀನೆ ತುಂಬಿರುವೆ ನನ್ನ ತನುಮನದಲ್ಲಿ
               ನಿನ್ನ ನಾ ಏನ್ನೆಂದು ನಿನ್ನ ಬಣ್ನಿಸಲಿ.......?
               ಎಷ್ಟೊಂದು ಸಿಹಿಯಿಹುದು ನಿನ್ನ ನಾಲಿಗೆಯಲ್ಲಿ
               ಹೇಳಲಾರದಷ್ಟು ಪ್ರೀತಿಯಿಹುದು ನಿನ್ನ ಮಡಿಲಿನಲ್ಲಿ
               ನಿನ್ನ ಬೆಳಕಲ್ಲಿ ಜಗವೆಲ್ಲಾ ಬೆಳಗಲ್ಲಿ.........
               ಓ ಕನ್ನಡಾಂಬೆ ನಿನಗೆ ಜಯವಾಗಲಿ.......               /1/          
               ವೀರ ಮಕ್ಕಳ ಹೆತ್ತ ವೀರ ತಾಯೆ ನೀನು
               ಆ ಒಡಲಲಿ ಜನಿಸಿದ ನಾ; ಪುಣ್ಯವಂತನು
               ಕವಿ ರತ್ನಗಳ ಹೆತು-ಹೊತ ಮಡಿಲು ನೀನ್ನದು
               ಆ ನೆರಳಲಿಯೆ  ಬೆಳೆಯುವ ಆಸೆ ನನ್ನದು......
               ನಿನ್ನ ಕೀರ್ತಿಯ ಹೊ ಎಂದಿಗೊ ಬಾಡದು.......
               ಬಾರಿಸುವ ನಿನ್ನ ಢಿಂಡಿಮ ಎಂದಿಗೊ ನಿಲ್ಲದು..       /2/
               ವಿಶ್ವ ಲಿಪಿಗಳ ರಾಣಿ ನೀ; ಕನ್ನಡಾಂಬೆ........
               ನಿನ್ನ ಕಂಪು ಪಸರಿಸುತಿಹಳು ಆಗುಂಬೆ.......
               ಜ್ಙಾನಪೀಠದ ತವರಿದು ಕರುನಾಡು.........
               ಶಿಲ್ಪ-ಕಲೆಗಳ ಗೊಡುಯಿದು ಬೆಲೊರು-ಹಳೆಬಿಡು
               ಸಾರ್ಥಕವಾಯಿತು ಬದುಕು ನಿನ್ನ ಮಣ್ಣಲಿ.......
               ಓ ಕನ್ನಡಾಂಬೆ ನಿನಗೆ ಜಯವಾಗಲಿ.............      /3/
                          
                                                                                 
                                                                                 ಇಂತಿ ನಿನ್ನ ಪ್ರೀತಿಯ
                                                                                       PRABHI

Wednesday, November 10, 2010

ನಿನ್ನ ಹೇಗೆ ಮರೆಯಲಿ......?

        ನಿನ್ನ ಮರೆಯಬಹುದು ನಾ
        ಆದರೆ, ನಿನ್ನ ನೆನಪು ಹೇಗೆ ಮರೆಯಲಿ ನಾ?
         
              ನಿನ್ನ ಕಣ್ಣಗಳ ಮರೆಯಬಹುದು ನಾ
              ಆದರೆ, ನಿನ್ನ ಕನಸ ಹೇಗೆ ಮರೆಯಲಿ ನಾ?

       ನಿನ್ನ ಮಾತು ಮರೆಯಬಹುದು ನಾ
       ಆದರೆ, ನಿನ್ನ ದ್ವನಿ ಹೇಗೆ ಮರೆಯಲಿ ನಾ?


   
       ಮರೆತರು ಮರೆಯಲಾಗದ ನೆನಪು ನೀನು....
       ಅರಿತರು ಅರೆಯಲಾಗದ ಒಲವು ನೀನು.......

      ನಿನ್ನ ಹೇಗೆ ಮರೆಯಲಿ ಹೇಳು ನಾನು...
      ಮತ್ತೆ ನೆನಪಾಗಿ ಕಾಡದಿರು ನೀನು........

      ನನ್ನ ಹೃದಯದ ಪ್ರತಿ ಉಸಿರು ನಿನ್ನ ಹೆಸರು...
      ನೀ ಈ ಹೃದಯ ಎಂದೂ ಮರೆಯದಂತ ಉಸಿರು.......



                                                               ಇಂತಿ ನಿನ್ನ ಪ್ರೀತಿಯ
                  
                                                                         Prabhi....