Tuesday, December 28, 2010

ಹಾಗೇ ಸುಮ್ಮನೆ ನಿನ್ನ ನೆನಪಾಗಿ............

[ನಿನ್ನ ಪ್ರೀತಿಯ ನೆನಪಲಿ ಎನೂ ನೆನಪಾಗಿ, ನಿನ್ನ ನೆನಪಿಸಿ... ಬರೆದ ನೆನಪಿನ ಓಲೇ; ನಿನ್ನ ಸವಿ ನೆನಪಿನಿಂದ.......]
ನನ್ನ ಎದೆಯಲಿ ಪ್ರೀತಿಯ ಬೀಜ ಬಿತ್ತಿ
ಪ್ರೇಮದ ನೀರ ಹನಿಸದೆ ಎಲ್ಲಿ ಹೋದೆ; ಓ ಗೆಳತಿ,
ನಿನ್ನ ನೆನಪಲಿ ಈ ನನ್ನ ಜೀವವ ನೂಕ್ಕುತ್ತಿರುವೆ
ಈ ನನ್ನ ನೆನಪಿಗೆ ಜೀವ ತುಂಬಲು ಬಾರೇ ನನ್ನ ಒಲವೇ        //ಪ//

           ನನ್ನ ಪ್ರೀತಿಯ ನಿನಗೆ ಹೇಗೆ ತೋರಿಸಲಿ
           ಈ ಜೀವ ನಿನ್ನದೆಂದು ನಿನಗೆ ಹೇಗೆ ಹೇಳಲಿ
           ನನ್ನ ಬಾಹುಬಂಧನದಲಿ ಬಂದಿತಳಾಗು ಒಮ್ಮೆ;
           ಈ ನನ್ನ ಎದೆಬಡಿತ ಕೇಳು ಬಾ ಹಾಗೆ ಸುಮ್ಮನೇ,,,,,, 
           ನಿನ್ನ ಹೆಸರೆ ಮಿಡಿಯುತ್ತಿದೆ ಪ್ರತಿ ಬಡಿತದಲ್ಲೋ....
           ಬರಿ ನಿನೇ ತುಂಬಿರುವೆ ನನ್ನ ಪ್ರತಿ ಸ್ವಾಸದಲ್ಲೂ,,,,,,,,,,,,,, //1//
                
                    ನನ್ನ ಜೀವಕ್ಕೆ ಜೀವವಾಗಿ ನೀನಿರುವೇ.......
                    ನನ್ನ ಎದೆಯಾಳದ ದೇವಿ ನಿನಾಗಿ ನಿಂತಿರುವೇ
                    ಒಮ್ಮೆಯಾದರು ಕರುಣೆ ತೋರಿಸು ನನ್ನ ಮೇಲೆ;
                    ಸುರಿಸು ನಿನ್ನ ಪ್ರೀತಿಯ ಮು್ತ್ತಿನ ಮಳೆ, ಓ ನನ್ನ ನಲ್ಲೆ
                    ಓ ಗೆಳತಿ, ಎಂದೆಂದಿಗೂ ನಿನ್ನ ಮರೆಯನು ನಾನು
                    ನಿನ್ನ ಮರೆತ ದಿನ ಈ ಜಗವ ಮರೇಯುವೆ ನಾನು....... //2//

             ಸೂರ್ಯ ಚಂದ್ರ ಚುಕ್ಕಿಗಳ ಆಣೆ......
             ನಿನ್ನ ಇಷ್ಟೋಂದು ಪ್ರೀತಿಸುವ ಹುಚ್ಚ ನಾನೇ
             ಓ ನನ್ನ ನಲ್ಲೇ ಹಿಂತಿರುಗಿ ನೋಡು ಒಮ್ಮೆ;
             ಅಪ್ಪಿ ತಪ್ಪಿ ಹಾಗೇ ಸುಮ್ಮನೇ,,,,,,,,,,,,,,,,,,
             ನಿನ್ನ ದಾರಿಯ ಕಾಯುತಾ ನಾನಿರುವೇ.....
             ನೀ ಬರುವ ದಾರಿಗೆ ನಗೆ ಹೂವ ಹಾಸಿ ಕಾದಿರುವೇ.......!      //3//



                                                                                     ಇಂತಿ ನಿನ್ನ ಪ್ರೀತಿಯ
                                                                                            ಪ್ರಭಿ............!

                                                           

No comments:

Post a Comment