ನಿನ್ನ ಪ್ರೀತಿಯ ಮಳೆ ಹನಿ ಹಿಡಿಯಲು
ತೆರೆದಿರುವೆ ನನ್ನ ಹೃದಯ ಚಿಪ್ಪಿನಂತೆ
ಸೇರು ಬಾ ಈ ಹೃದಯ ಸ್ವಾತಿ ಮುತ್ತಿನಂತೆ //1//
ಎದೆಯಲಿ ಕವಿದ ಕಾರ್ಮೋಡ ಕರಗಿಸಿ
ಮನದಲಿ ಪ್ರೀತಿಯ ಮಳೆ ಸುರಿಸಿ
ಬಾಳಲಿ ಪ್ರೇಮದ ಬೆಳೆ ಬೆಳಿಸಿ
ನನ್ನ ಸೇರು ಬಾ ನೀ ಈ ಹೃದಯ ಉಳಿಸಿ //2//
ನೀ ಬರುವ ದಾರಿಯ ಕಾಯುವೆ ನಾ;
ನಗೆ ಹೊವ ಹಾಸಿ................
ಈ ಹೃದಯ ತೆರೆದಿಡುವೆ ನಿನ್ನ;
ಸ್ವಾಗತಿಸಲು...........
ನೀ ಬರದೆ ಹೋಗಬೇಡ;
ಈ ಹೃದಯ ನರಳಿಸಿ //3//
ಇಂತಿ ನಿನ್ನ ಪ್ರೀತಿಯ
PRABHI.....
No comments:
Post a Comment