ನೀನೆ ತುಂಬಿರುವೆ ನನ್ನ ತನು- ಮನದಲ್ಲಿ
ನಿನ್ನ ನಾ ಏನ್ನೆಂದು ನಿನ್ನ ಬಣ್ನಿಸಲಿ.......?
ಎಷ್ಟೊಂದು ಸಿಹಿಯಿಹುದು ನಿನ್ನ ನಾಲಿಗೆಯಲ್ಲಿ
ಹೇಳಲಾರದಷ್ಟು ಪ್ರೀತಿಯಿಹುದು ನಿನ್ನ ಮಡಿಲಿನಲ್ಲಿ
ನಿನ್ನ ಬೆಳಕಲ್ಲಿ ಜಗವೆಲ್ಲಾ ಬೆಳಗಲ್ಲಿ.........
ಓ ಕನ್ನಡಾಂಬೆ ನಿನಗೆ ಜಯವಾಗಲಿ....... /1/
ವೀರ ಮಕ್ಕಳ ಹೆತ್ತ ವೀರ ತಾಯೆ ನೀನು
ಆ ಒಡಲಲಿ ಜನಿಸಿದ ನಾ; ಪುಣ್ಯವಂತನು
ಕವಿ ರತ್ನಗಳ ಹೆತು-ಹೊತ ಮಡಿಲು ನೀನ್ನದು
ಆ ನೆರಳಲಿಯೆ ಬೆಳೆಯುವ ಆಸೆ ನನ್ನದು......
ನಿನ್ನ ಕೀರ್ತಿಯ ಹೊ ಎಂದಿಗೊ ಬಾಡದು.......
ಬಾರಿಸುವ ನಿನ್ನ ಢಿಂಡಿಮ ಎಂದಿಗೊ ನಿಲ್ಲದು.. /2/
ವಿಶ್ವ ಲಿಪಿಗಳ ರಾಣಿ ನೀ; ಕನ್ನಡಾಂಬೆ........
ನಿನ್ನ ಕಂಪು ಪಸರಿಸುತಿಹಳು ಆಗುಂಬೆ.......
ಜ್ಙಾನಪೀಠದ ತವರಿದು ಕರುನಾಡು.........
ಶಿಲ್ಪ-ಕಲೆಗಳ ಗೊಡುಯಿದು ಬೆಲೊರು-ಹಳೆಬಿಡು
ಸಾರ್ಥಕವಾಯಿತು ಬದುಕು ನಿನ್ನ ಮಣ್ಣಲಿ.......
ಓ ಕನ್ನಡಾಂಬೆ ನಿನಗೆ ಜಯವಾಗಲಿ............. /3/
ಇಂತಿ ನಿನ್ನ ಪ್ರೀತಿಯ
PRABHI
No comments:
Post a Comment